ಹೆರಿಗೆಯಾದಾಗ, ಋತುಮತಿಯಾದಾಗ ಹೆಣ್ಣುಮಕ್ಕಳನ್ನು ಸೂತಕದ ಹೆಸರಿನಲ್ಲಿ ಊರಿನಿಂದ ಆಚೆ ಇರುವ ತಾತ್ಕಾಲಿಕ ಗುಡಿಸಲಿನಲ್ಲಿ ಕೆಲವು ದಿನಗಳ ಕಾಲ ಇಡುವ ಮೂಢ ನಂಬಿಕೆಗೆ ತುಮಕೂರಿನಲ್ಲಿ ನವಜಾತ ಶಿಶುವೊಂದು ಬಲಿಯಾಗಿದೆ. ನತದೃಷ್ಟ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟಿದ್ದವು. ಆಸ್ಪತ್ರೆಯಲ್ಲಿ ಒಂದು ಮಗು ಸಾವಿಗೀಡಾಗಿತ್ತು. ಮತ್ತೊಂದು ಮಗುವಿನ ಜತೆ ಬಾಣಂತಿ ಮನೆಗೆ ಮರಳಬೇಕಿತ್ತು.
Comments